ಪ್ರವಾದಿ ಮುಹಮ್ಮದ್ ರವರು ಮೌಢ್ಯವನ್ನು ಹೋಗಲಾಡಿಸಿ;
ಜಗತ್ತಿಗೆ ಶಾಂತಿಯ ಸಂದೇಶವನ್ನು ಕೊಟ್ಟರು.
ಶ್ರೀ.ಮೊಹ್ಸಿನ್ ರವರು ಬರೆದಿರುವ ಈ ಪುಸ್ತಕವನ್ನು ಎಲ್ಲರು ಯಾವುದೇ ಮತ ಭೇದವಿಲ್ಲದೆ ಅಧ್ಯಯನ ಮಾಡಿ ತಿಳಿದುಕೊಳ್ಳಿ.
ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
ಸಿದ್ದಗಂಗಾ ಮಠ, ತುಮಕೂರು
ನಾನು ತಕ್ಕ ಮಟ್ಟಿಗೆ ಕುರ್ಆನ್ ನ ಅಧ್ಯಾಯನ ನಡೆಸಿದ್ದೇನೆ. ಪ್ರವಾದಿ ಮುಹಮ್ಮದ ಬದುಕಿನಲ್ಲಿ ಆ ಪವಿತ್ರ ಗ್ರಂಥದಲ್ಲಿರುವ ಭೋದನೆಗಳ ಪ್ರತಿಬಿಂಬವನ್ನು ನಾವು ಕಾಣಬಹುದು. ಹಾಗೆಯೇ ಆ ಕೃತಿ ಇಸ್ಲಾಮ್ ಧರ್ಮದ ಕಿರು ಪರಿಚಯವೂ ಹೌದು. ಯಾಕೆಂದರೆ ಪ್ರವಾದಿ ಮುಹಮ್ಮದ್ ತಮ್ಮ ಜೀವನದ ಮೂಲಕ ಇಸ್ಲಾಮಿನ ಪ್ರಾಯೋಗಿಕ ಮಾದರಿಯೊಂದನ್ನು ಪ್ರಸ್ತುತಪಡಿಸಿದರು. 'ಮುಹಮ್ಮದ್ - ಸರ್ವ ಜನರ ಪ್ರವಾದಿ ' ಖಂಡಿತವಾಗಿಯೂ ಓದಲರ್ಹ ಹೊತ್ತಗೆ.
ಪ್ರೊ.ಜಿ.ವೆಂಕಟಸುಬ್ಬಯ್ಯ
ಕನ್ನಡ ನಿಘಂಟು ತಜ್ಞ, ಹತ್ತಕ್ಕೂ ಹೆಚ್ಚು ನಿಘಂಟುಗಳನ್ನೂ ರಚಿಸಿರುವ ಇವರು ಆಧುನಿಕ ಕನ್ನಡ ನಿಘಂಟುಗಳ ಜನಕ ಎಂದೇ ಖ್ಯಾತಿ ಪಡೆದಿದ್ದಾರೆ.
'ಮುಹಮ್ಮದ್ - ಸರ್ವ ಜನರ ಪ್ರವಾದಿ ' ಪ್ರವದಿವರ್ಯರನ್ನು ಬದುಕಿನ ಎಲ್ಲ ರಂಗಗಳಲ್ಲಿ ಮಾರ್ಗದರ್ಶನ ನೀಡುವ ವ್ಯಕ್ತಿ ಎಂಬ ನೆಲೆಯಲ್ಲಿ ಪರಿಚಿಸುತ್ತದೆ. ಪ್ರವಾದಿಯ ಭೂದನೆಗಳು ನಿಜವಾಗಿಯೂ ಇಡೀ ಮಾನವಕುಲಕ್ಕೆ ಮಾರ್ಗದೀಪ. ಈ ಕೃತಿಯನ್ನು ನಾನು ಅತೀವ ಆಸಕ್ತಿ ಯಿಂದ ಓದಿದೆ ಮತ್ತು ಪ್ರವಾದಿ ಮುಹಮ್ಮದರಂತಹ ಮಹಾನ್ ವ್ಯಕ್ತಿಯ ಭೂಧನೆಗಳನ್ನು ತಿಳಿಯಲು ಇದನ್ನು ಪ್ರತಿಯೊಬ್ಬರೂ ಓದಬೇಕೆಂಬುದು ನನ್ನ ಸಲಹೆ.
ಡಾ.ಚಂದ್ರಶೇಖರ ಕಂಬಾರ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು
'ಮುಹಮ್ಮದ್ - ಸರ್ವ ಜನರ ಪ್ರವಾದಿ ' ಪೈಗಂಬರ್ ಅವರ ಜೀವನಕ್ಕೆ ಸಂಬಂಧಿಸಿದ ಒಂದು ವಿಶಿಷ್ಟ ಕೃತಿ. ಲೇಖಕ ಮೂಹ್ಸಿನ್ ಅವರು ಪ್ರವಾದಿಗಳ ಬಗ್ಗೆ ಹೃದಯದಲ್ಲಿ ಗಾಢವಾದ ಪ್ರೀತಿ ಇಟ್ಟುಕೊಂಡೆ ಹತ್ತು ಹಲವು ವಿಷಯಗಳನ್ನು ಒಬ್ಬ ಸಂಶೋದಕನ ನೆಲೆಯಲ್ಲಿ ಈ ಕೃತಿಯಲ್ಲಿ ವಿಸ್ಲೇಷಿಸಿದ್ದಾರೆ. ಪ್ರವಾದಿ ಮುಹಮ್ಮದರ ಬದುಕಿನ ಹತ್ತು ಹಲವು ಮಗ್ಗುಲನ್ನು ಅವರು ಅನಾವರಣಗೊಳಿಸಿದ್ದಾರೆ. ಈ ಪುಸ್ತಕವನ್ನು ತೆರೆದ ಹೃದಯದಿಂದ ಓದಿದ ಯಾವುದೇ ವ್ಯಕ್ತಿಯು ಪ್ರವಾದಿ ಮುಹಮ್ಮದರ ಬಗ್ಗೆ ಹೆಮ್ಮೆ ಪಡದಿರಲಾರ. ಈ ಕೃತಿಯನ್ನು ಎಲ್ಲಾ ಧರ್ಮಗಳ ಜನರೂ ಓದಬೇಕು.
ಡಾ.ಯು.ಆರ್.ಅನಂತಮೂರ್ತಿ
ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬರಹಗಾರರು
sasas